ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ರೈಲು ನಿಲ್ದಾಣ ನಿರ್ಮಾಣ ಹಂತದಲ್ಲಿರುವ ಭಾರತೀಯ ರೈಲ್ವೆ ರೈಲು ನಿಲ್ದಾಣವಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೫ ಕಿ.ಮೀ . ದೂರದಲ್ಲಿದೆ , ಇದು ಯಲಹಂಕ - ಕೋಲಾರ ಮಾರ್ಗದಲ್ಲಿದ್ದು , ಬೆಂಗಳೂರು ನಗರ ರೈಲು ನಿಲ್ದಾಣದಿಂದ 45 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ. == ಇತಿಹಾಸ == ವಿಮಾನ ನಿಲ್ದಾಣದ ಈಶಾನ್ಯ ಗಡಿಯಲ್ಲಿ ಸಾಗುವ ರೈಲು ಮಾರ್ಗದಲ್ಲಿ ನಿಲುಗಡೆ ರೈಲು ನಿಲ್ದಾಣವನ್ನು ನಿರ್ಮಿಸಲು 2014 ರಲ್ಲಿಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೂಚಿಸಿತ್ತು. 2019 ರಲ್ಲಿ ಅಸ್ತಿತ್ವದಲ್ಲಿರುವ ಯಲಹಂಕ - ದೇವನಹಳ್ಳಿ ಮಾರ್ಗದಲ್ಲಿ ನಿಲ್ದಾಣವನ್ನು ನಿರ್ಮಿಸಲು ಅನುಮತಿ ಪಡೆಯಲಾಗಿದೆ .. ನಿಲ್ದಾಣವನ್ನು ವಿಮಾನ ನಿಲ್ದಾಣ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಯಾಲ್) ನಿರ್ಮಿಸುತ್ತಿದ್ದಾರೆ, ಪೂರ್ಣಗೊಂಡ ನಂತರ, ನಿಲ್ದಾಣವನ್ನು ರೈಲ್ವೆಗೆ ಹಸ್ತಾಂತರಿಸಲಾಗುವುದು. == ರಚನೆ ಮತ್ತು ವಿಸ್ತರಣೆ == ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ತಲಾ 400 ಮೀಟರ್ ಉದ್ದ, ಶೆಲ್ಟರ್‌ಗಳು, ದೀಪ, ಬೆಂಚುಗಳು ಮತ್ತು ಬುಕಿಂಗ್ ಕಚೇರಿ ಸೌಲಭ್ಯ ಇರಲಿದೆ. == ಹಿಂದಿನ ಮತ್ತು ಮುಂದಿನ ನಿಲ್ದಾಣಗಳು == == ಉಲ್ಲೇಖಗಳು ==